ಆತ್ಮಸಾಕ್ಷಾತ್ಕಾರ
ಹೊರವಸ್ತುಗಳಂತೆ ಆತ್ಮ ಇಂದ್ರಿಯಪ್ರತ್ಯಕ್ಷ ವಿಷಯವಲ್ಲ. ಆದರೂ ನಮಗೆ ಆತ್ಮದ ಅರಿವು ಇದೆ. ಈ ನೆರವು ಅಹಂಕಾರದಿಂದ ಭಿನ್ನವಾದದ್ದು, ಅತೀತವಾದದ್ದು, ಹೊರವಸ್ತುಗಳಿಂದ ಭಿನ್ನವಾದ ನಾನು ಎಂಬ ವ್ಯಕ್ತಿತ್ವದ ಅರಿವು ಅಹಂಕಾರ. ಆತ್ಮಸಾಕ್ಷಾತ್ಕಾರವಾದರೂ ನಾನು ಎಂಬುದು ಇತರ ವಸ್ತುಗಳಿಗಿಂತ, ಇತರರಿಗಿಂತ ಭಿನ್ನವಲ್ಲ-ಎಂದು ತಿಳಿಯುವುದೇ ಆಗಿದೆ ಎಂದರೆ, ಎಲ್ಲ ವಸ್ತುಗಳಿಗೂ ಎಲ್ಲ ವ್ಯಕ್ತಿಗಳಿಗೂ ಸಾಮಾನ್ಯವಾದದ್ದೇ ಆತ್ಮ ಎಂಬ ತಿಳಿವೇ ಆತ್ಮಸಾಕ್ಷಾತ್ಕಾರ. ಇದು ಲೌಕಿಕ ಪ್ರತ್ಯಕ್ಷಕ್ಕಿಂತ ಭಿನ್ನವಾದದ್ದು, ಆದ್ದರಿಂದ ಇದನ್ನು ಅಲೌಕಿಕ ಪ್ರತ್ಯಕ್ಷವೆಂದು ಭಾವಿಸಲಾಗಿದೆ. ತತ್ತ್ವಮಸಿ, ಅಹಂ ಬ್ರಹ್ಮಾಸ್ಮಿ ಎಂಬ ಮಹಾ ವಾಕ್ಯಗಳಿಂದ ಹುಟ್ಟುವ ಜ್ಞಾನ ಅಲೌಕಿಕಪ್ರತ್ಯಕ್ಷ.
(ನೋಡಿ- ಅದ್ವೈತ)										
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ